SAME

Select Page

ಸ್ವದೇಶಿ ಅಡಿಕೆ ಮಿಲ್ಸ್ ಮತ್ತು ಇಂಜಿನಿಯರಿಂಗ್

SAME(ಸ್ವದೇಶಿ ಅಡಿಕೆ ಮಿಲ್ಸ್ ಮತ್ತು ಇಂಜಿನಿಯರಿಂಗ್) ರೈತರನ್ನು ಸ್ವಾತಂತ್ರ, ದಕ್ಷ ಮತ್ತು ಲಾಭದಾಯಕವಾಗಿಸಲು ಕೃಷಿ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸುವುದರ ಮೇಲೆ ಗಮನ ಹರಿಸುತ್ತದೆ ಹಾಗೂ ಇದನ್ನು ಹಳ್ಳಿಹಳ್ಳಿಗೆ ತಲುಪಿಸಲು ಪ್ರಯತ್ನಿಸುತ್ತದೆ.

ನಮ್ಮ ಸೇವೆಗಳು:

ಅಡಿಕೆ ಮಿಲ್ ಸ್ಥಾಪಿಸುವುದು

ಬಿಡಿ ಭಾಗಗಳ ಮಾರಾಟ

ಹೊಸ ಯಂತ್ರಗಳ ಅನ್ವೇಷಣೆ

ಉತ್ತಮ ಸೇವೆ

ನಿಮ್ಮ ಯೋಜನೆಗೆ ಕೊಟೇಶನ್ ಪಡೆಯಿರಿ

ಯಾವುದೇ ಯೋಜನೆಯು ತುಂಬಾ ದೊಡ್ಡದಲ್ಲ ಅಥವಾ ತುಂಬಾ ಚಿಕ್ಕದಲ್ಲ

ಇತ್ತೀಚಿಗೆ ಅಡಿಕೆ ಬೆಳಗಾರಿಕೆ ತುಂಬಾ ಎಥೇಚ್ಛವಾಗಿದ್ದು ಅದನ್ನು ಸಂಸ್ಕರಣೆ ಮಾಡಲು ತುಂಬಾ ಸಮಯ ಮತ್ತು ಕೂಲಿ ಕಾರ್ಮಿಕರು ಬೇಕಾಗುತ್ತಾರೆ. ಇಂದಿನ ದಿನಗಳಲ್ಲಿ ಕೂಲಿ ಕಾರ್ಮಿಕರ ಅಭಾವದಿಂದ ಅಡಿಕೆ ಸಂಸ್ಕರಣೆ ನಿಗದಿತ ಸಮಯಕ್ಕೆ ತಕ್ಕಂತೆ ಆಗುತ್ತಿಲ್ಲ.

ನಮ್ಮ ಸ್ವದೇಶಿ ಅಡಿಕೆ ಮಿಲ್ಸ್ ಮತ್ತು ಇಂಜಿನಿಯರಿಂಗ್ ಕಂಪನಿಯಲ್ಲಿ ಎಲ್ಲಾ ಹಂತಕ್ಕೆ ಬೇಕಾದ ಆಧುನಿಕ ಯಂತ್ರಗಳು ಲಭ್ಯವಿದ್ದು ಅವುಗಳನ್ನು ಜೋಡಿಸಿ ಅಡಿಕೆ ಮಿಲ್ ತಂತ್ರಜ್ಞಾನವನ್ನು ಪರಿಚಯಿಸುತ್ತಿದ್ದೇವೆ. ನಮ್ಮ ಅಡಿಕೆ ಮಿಲ್ ವಿಶೇಷತೆ ಏನಂದರೆ ಹಸಿ ಅಡಿಕೆಯನ್ನು ಸ್ವಯಂ ಚಾಲಿತ ಯಂತ್ರದಿಂದ ಶುಚಿಗೊಳಿಸಿ, ಸುಲಿದು ಅಡಿಕೆ ಮತ್ತು ಸಿಪ್ಪೆಯನ್ನು ಬೇರ್ಪಡಿಸಿ ಸುಲಿದ ಅಡಿಕೆಯನ್ನು ಜರಡಿಯ ಮುಖಾಂತರ ಸೋಸಿ, ಸ್ಕ್ರೀನಿಂಗ್ ವೈಬ್ರೆಟರ್ ಮೇಲೆ ಸಾಗಿಸುವುದರ ಮೂಲಕ ಅಡಿಕೆ ಮತ್ತು ಗೊರಬಲನ್ನು ವಿಂಗಡಿಸಿ ಪುಡಿಯನ್ನು ಬೇರ್ಪಡಿಸಲಾಗುತ್ತದೆ. ನಂತರ ಹಸಿ ಅಡಿಕೆಯನ್ನು ಮೂಗು ತೊಟ್ಟು ಮುರಿಯದೆ, ಸಾಫ್ಟ್ವೇರ್ ಕಂಟ್ರೋಲ್ಡ್ ಡಿಜಿಟಲ್ ಡ್ರೈಯರ್ ಮೂಲಕ ಕಡಿಮೆ ಖರ್ಚು ಮತ್ತು ಸಮಯ ಉಳಿತಾಯ ಮಾಡಿ ಉತ್ತಮ ಗುಣಮಟ್ಟದ, ತೂಕ ನಷ್ಟವಾಗದ, ಬೇಯಿಸಿದ ಮತ್ತು ಶೇಕಡ 80ರಷ್ಟು ಒಣಗಿದ ಅಡಿಕೆಯನ್ನು ಪಡೆಯಬಹುದು. ನಮ್ಮ ಡ್ರೈಯರ್ ನಲ್ಲಿ ಅಡಿಕೆ ಬೇಯಿಸಲು ನೀರು ಮತ್ತು ಕಾಚ್ ಅಥವಾ ಚೊಗರು ಬಳಸುವ ಅವಶ್ಯಕತೆ ಇಲ್ಲ. ಇದು ಸ್ವಯಂ ಚಾಲಿತ ಅಡಿಕೆ ಬೇಯಿಸುವ ಯಂತ್ರವಾಗಿದ್ದು ಕಾರ್ಯನಿರ್ವಹಿಸಲು ಸುಲಭ ಹಾಗೂ ಎಲ್ ಪಿ ಜಿ ಗ್ಯಾಸ್ ಮುಖಾಂತರ ಕೆಲಸ ಮಾಡುತ್ತದೆ. ನಮ್ಮ ಡ್ರೈಯರ್ ಮೂಲಕ ಬೇಯಿಸಿದ ಅಡಿಕೆಯನ್ನು ಕೇವಲ ಎರಡು ದಿನ ಒಣಗಿಸುವುದರ ಮೂಲಕ ಮಾರುಕಟ್ಟೆಗೆ ತಲುಪಿಸಬಹುದು.

ನಮ್ಮ ಸ್ವದೇಶಿ ಅಡಿಕೆ ಮಿಲ್ಸ್ ಮತ್ತು ಇಂಜಿನಿಯರಿಂಗ್ ಕಂಪನಿ ಆಧುನಿಕ ತಂತ್ರಜ್ಞಾನ ಹಾಗೂ ಸಾಫ್ಟ್ವೇರ್ ನಿಂದ ಕೂಡಿದ ಯಂತ್ರಗಳನ್ನು ಹಳ್ಳಿಹಳ್ಳಿಗೆ ತಲುಪಿಸುವುದರ ಮೂಲಕ ರೈತರು ತಾವೇ ಕಡಿಮೆ ಕೂಲಿ ಕಾರ್ಮಿಕರನ್ನು ಬಳಸಿ ಉತ್ತಮ ಲಾಭ ಪಡೆದುಕೊಳ್ಳಬಹುದು.

Products

Gallery

ಇತ್ತೀಚಿಗೆ ಅಡಿಕೆ ಬೆಳಗಾರಿಕೆ ತುಂಬಾ ಎಥೇಚ್ಛವಾಗಿದ್ದು ಅದನ್ನು ಸಂಸ್ಕರಣೆ ಮಾಡಲು ತುಂಬಾ ಸಮಯ ಮತ್ತು ಕೂಲಿ ಕಾರ್ಮಿಕರು ಬೇಕಾಗುತ್ತಾರೆ. ಇಂದಿನ ದಿನಗಳಲ್ಲಿ ಕೂಲಿ ಕಾರ್ಮಿಕರ ಅಭಾವದಿಂದ ಅಡಿಕೆ ಸಂಸ್ಕರಣೆ ನಿಗದಿತ ಸಮಯಕ್ಕೆ ತಕ್ಕಂತೆ ಆಗುತ್ತಿಲ್ಲ.

Call For a Quote:

+91-7996997555

SAME

Kariganur Road, Near Shrusti Cornvent, Kariganur, Chennagiri

SAME FLOW